ನೋಡಮ್ಮ ಹುಡುಗಿ

ಹಂಸಲೇಖ

ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ

ನೀನಿಲ್ಲಿ ಸೇರೋದು ಓದುವ ಸಲುವಾಗಿ

ಹುಡುಗೀರು ಕಾಲೇಜು, ನೀನಿನ್ನು ಟೀನೇಜು

ಹುಷಾರಾಗಿರ್ಬೇಕು ಚೆನ್ನಾಗಿ ಓದ್ಬೇಕು

ನಾನ್ ತುಂಬ ಕಟ್ನಿಟ್ಟು, ತಲೆ ಕೆಟ್ರೆ ಕಿಕ್ಕೌಟು

ನೆಲ ನೋಡ್ಕೊಂತ ಬರ್ಬೇಕು, ನೆಲ ನೋಡ್ಕೊಂತ ಹೊಗ್ಬೇಕು

ಹೊ.. ಅಂಡರ್ ಸ್ಟಾಂಡ್, ಯೆಸ್ ಸಾರ್

ಹೆಲ್ಲೊ ಮೈ ಲವ್ಲಿ ಲೇಡಿ ಹೂ ಆರ್ ಯು, ಹೂ ಆರ್ ಯು?

ಕನ್ನಡ ಬರೋದಿಲ್ವ ಕಣ್ಣೆರಡು ಕಾಣೊಲ್ವಾ

ಕನ್ನಡ್ಕದೊಳಗಿಂದ ಕಾಣ್ತಿದೆ ಈ ಅಂದ

ಹೌದೇನೋ ಮನ್ಮಥ, ಬಾಯ್ಮುಚ್ಕೊಂಡ್ ಹೋಗಪ್ಪ

ಹೊಸ ಹುಡ್ಗಿ ಅಂತ ಬಿಡ್ತಿನಿ ನಾಳೆಯಿಂದ ನೋಡ್ಕೋಂತೀನಿ

ಅಂಡರ್ ಸ್ಟಾಂಡ, ಯೆಸ್ ಬಾಸ್

ಸುಂದರ ಯುವಕ ದುಶ್ಯಂತ ರಾಜ ಬೇಟೆಯನಾಡಲು ಬಂದ

ಎಲ್ಗೆ ಸಾರ್? - ಹ್ಞಾ.. ಕಾಡ್ಗೆ ಸಾರ್

ಬೇಟೆಯ ಮರೆತು ಕಾಡಿನ ಸೊಗಸು ನೋಡುತ ಸವಿಯುತ ನಿಂದ

ಯಾಕೆ ಸಾರ್? - ಏಯ್, ಸುಮ್ನೆ ಸಾರ್

ಕಾಡಿನ ನಡುವೆ ಹುಣ್ಣಿಮೆಯಂತ ಸುಂದರ ಹುಡುಗಿಯ ಕಂಡ

ಹೌದಾ ಸಾರ್, ಹಹಾಹಾ ಹೌದು ಸಾರ್

ಹುಡುಗಿಯ ನೋಡಿ, ಹತ್ತರ ಓಡಿ ಹುಡುಗಿಯ ಕೈ ಹಿಡಕೊಂಡ

ಆಮೇಲ್ ಸಾರ್, ಹೇಳಿ ಸಾರ್

ಹತ್ತಿರ ಕರೆಯುತ್ತ, ತೋಳಿಂದ ಬಳಸುತ್ತ,

ಕಣ್ಣನ್ನೇ ನೋಡುತ್ತ, ಪ್ರೀತಿಯ ಮಾಡುತ್ತ,

ಯಾರೆ ನೀನು ಚೆಲುವೆ ಅಂದ,

ನಿನ್ನ ಅಂದ ಚೆಂದ ಅಂದ

ಹಣೆಯಲ್ಲಿ ಬೆವರುತ್ತ, ತನುವೆಲ್ಲಾ ನಡುಗುತ್ತ,

ನೆಲವನ್ನೇ ನೋಡುತ್ತಾ, ನುಡಿದಳು ನಾಚುತ್ತಾ

ನಾನು ನಿನಗೆ ಇನ್ನು ಸ್ವಂತ, ಹೆಸರು ಶಕುಂತಲಾ ಅಂತ

ಬಂದ್ರು ಸಾರ್, ಓಹೊ.. ಬಂದ್ರು ಸಾರ್, ಓಹೊ

ಶಕುಂತಲಾ ಓಹೊ ಬಂದ್ರು ಸಾರ್, ಓಹೊ

ನೀನಾ ಶಕುಂತಲಾ? - ಅಲ್ಲ ನಾನ್ ಶಶಿಕಲಾ

ಯಾರನ್ನ ನೋಡ್ಬೇಕು? - ನಿಮ್ಮನ್ನೇ ನೋಡ್ಬೇಕು

ಏನಾಗ್ಬೇಕಾಗಿತ್ತು? - ಅಡ್ಮಿಟ್ಟಾಗ್ಬೇಕಿತ್ತು

ಸರಿ ಈ ಕಡೆ ಕಳ್ಸಿ ಸಾರ್ - ಶಟ್ ಅಪ್ ಅಂದ್ರೆ ಬಾಯ್ಮುಚ್ಚು ಸಾರ್

ಹೋಗಮ್ಮ ಹುಡುಗಿ ಅಲ್ಲೆ ಹಿಂದೆ ಅಡ್ಜೆಸ್ಟ್ ಮಾಡ್ಕೊ

ಅಲ್ಲೆ ಹಿಂದೆ ಅಡ್ಜೆಸ್ಟ್ ಮಾಡ್ಕೊ

ನಿನಗ್ಯಾವುದಿಷ್ಟವೋ ಆ ಬೇಂಚೆ ಸೆಲೆಕ್ಟ್ ಮಾಡ್ಕೊ

ಈ ಬೇಂಚೆ ಸೆಲೆಕ್ಟ್ ಮಾಡ್ಕೊ

ಬಂದ್ಕೂಡ್ಲೆ ಮೀಟಿಂಗಾ? ಕಂಡ್ಕೂಡ್ಲೆ ಕಿಸ್ಸಿಂಗಾ?

ಲಕ್ಷ್ಮೀ ನೀ ಸ್ವಲ್ಪ ಸರ್ಕೊ, ಶಶಿ ನೀ ಇಲ್ಕುತ್ಕೋ

ಪೀಟರ್ ನೀ ಕೈ ಎತ್ಕೋ, ರೀಟಾ ನೀ ಸೆರಗ್ ಮುಚ್ಕೋ

ಪೋಲಿ ಆಟವೆಲ್ಲ ಬಿಡಬೇಕು ಬರೀ ಪಾಠವನು ಕಲಿಬೇಕು

ಅಕ್ಷರ ಪಲ್ಲಟ ಆಟವು ಪದಗಳನ್ನು ಜೋಡಿಸುವ ಒಂದು ಸುಲಭವಾದ ಮತ್ತು ಆಡಲು ಮನರಂಜನೆಯ ಆಟ.
ಅಕ್ಷರ ಪಲ್ಲಟ
ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!

ದೈನಂದಿನ ಪಂಚಾಂಗ

ನಿಖರವಾದ ದೈನಂದಿನ ಪಂಚಾಂಗ ವಿವರಗಳನ್ನು ಅನ್ವೇಷಿಸಿ. ತಿಥಿ, ನಕ್ಷತ್ರ, ಯೋಗ, ಕರಣ, ಮತ್ತು ಶುಭ/ಅಶುಭ ಸಮಯಗಳ ನಿಖರವಾದ ಮಾಹಿತಿಯನ್ನು ಪಡೆಯಿರಿ.

ಅಕ್ಷರ ಪಲ್ಲಟ

ಅಕ್ಷರ ಪಲ್ಲಟ ಆಟವು ಪದಗಳನ್ನು ಜೋಡಿಸುವ ಒಂದು ಸುಲಭವಾದ ಮತ್ತು ಆಡಲು ಮಜಾ ಕೊಡುವ ಆಟ. ಇದರಲ್ಲಿ, ಪ್ರತಿ ಹಂತದಲ್ಲೂ ಅಕ್ಷರಗಳನ್ನು ಸರಿಹೊಂದಿಸಿ ಒಂದು ಒಳ್ಳೆಯ ಪದವನ್ನು ಕಟ್ಟಬೇಕು. ನೀವು ಮುಂದಿನ ಹಂತಗಳಿಗೆ ಹೋದಂತೆ, ಪದಗಳು ಉದ್ದವಾಗುತ್ತವೆ ಮತ್ತು ಆಟವು ಸ್ವಲ್ಪ ಕಷ್ಟವಾಗುತ್ತದೆ. ಪ್ರತಿ ಸರಿ ಉತ್ತರಕ್ಕೂ ನಿಮಗೆ ಅಂಕಗಳು ಸಿಗುತ್ತವೆ.